Sunday 1 January 2017

೨೦೧೬ ಪುನರವಲೋಕನ ; ೨೦೧೭ ದರ್ಶನ


ಪ್ರಿಯ ಹಳೆಯ ೨೦೧೬ ವರ್ಷವೇ 
ಧನ್ಯವಾದ ನಿನಗೆ 
ನೋಡದ ದಾರಿಗೆ ನನ್ನನು ನೂಕಿದ್ದಕ್ಕೆ 
ಕಾಣದ ಸಿಹಿ ಕಹಿಯ ದರ್ಶನ ಮಾಡಿಸಿದ್ದಕ್ಕೆ 
ಈ ಮೂಲಕ ನನ್ನನು ಮತ್ತಷ್ಷ್ಟು
ಪರಿ ಪಕ್ವವಾಗಿಸಿದ್ದಕ್ಕೆ .

ಪ್ರಿಯ ಹೊಸ ೨೦೧೭ ವರ್ಷವೇ 
ನವೀಕೃತ ಉತ್ಸುಕತೆಯೊಂದಿಗೆ 
ಮತ್ತೆ ನಿನ್ನ ಮಾರ್ಗ ತುಳಿಯಲು ಅಣಿಯಾಗಿದ್ದೇನೆ  
ಬರಲಿರುವ ಹೊಸ ಸವಾಲುಗಳನ್ನು ಎದುರಿಸಿ 
ಆಯ್ಕೆ ಮತ್ತು ಧೈರ್ಯದ ಬದುಕನ್ನು ಜೀವಿಸಲು ಸಜ್ಜಾಗಿದ್ದೇನೆ.

ಓ ದೇವರೇ ನೀನು ಕಾಲಾತೀತ 
ನಿನಗೆ ಧನ್ಯವಾದಗಳು 
ಮತ್ತೆ ಹೊಸ ಸೂರ್ಯನ ನೋಡುವ 
ಅನುಗ್ರಹ ದಯಪಾಲಿಸಿದ್ದಕ್ಕೆ .

Saturday 14 May 2016

ಸಫಲ ಸಂವಹನಕ್ಕೆ ಸಲಹೆಗಳು 


ಸಫಲ ಸಂವಹನಕ್ಕೆ ಸಲಹೆಗಳು:
----------------------------------------
ಮಾತನಾಡುವಾಗ......
# ತಾಯಿಯೊಂದಿಗೆ ಮಮತೆಯಿಂದ 
ಮಾತನಾಡಿ 
# ತಂದೆಯೊಂದಿಗೆ ಗೌರವದಿಂದ
ಮಾತನಾಡಿ
# ಗುರುವಿನೊಂದಿಗೆ ವಿನಮ್ರತೆಯಿಂದ 
ಮಾತನಾಡಿ
# ಪತ್ನಿಯೊಂದಿಗೆ ಸತ್ಯವಾಗಿ 
ಮಾತನಾಡಿ
# ಸಹೋದರರೊಂದಿಗೆ ಸಂಯಮದಿಂದ 
ಮಾತನಾಡಿ 
# ಸಹೋದರಿಯೊಂದಿಗೆ ಪ್ರೀತಿಯಿಂದ 
ಮಾತನಾಡಿ 
# ಮಕ್ಕಳೊಂದಿಗೆ ಉತ್ಸಾಹದಿಂದ 
ಮಾತನಾಡಿ
# ಸಂಭಂದಿಕರೊಂದಿಗೆ ಪರಾನುಭೂತಿಯಿಂದ 
ಮಾತನಾಡಿ
# ಸ್ನೇಹಿತರೊಂದಿಗೆ ಮುಕ್ತವಾಗಿ
ಮಾತನಾಡಿ
# ಅಧಿಕಾರಿಗಳೊಂದಿಗೆ ನಯವಾಗಿ
ಮಾತನಾಡಿ
# ವ್ಯಾಪಾರಿಗಳೊಂದಿಗೆ ಕಟ್ಟುನಿಟ್ಟಾಗಿ
ಮಾತನಾಡಿ
# ಗ್ರಾಹಕರೊಂದಿಗೆ ಪ್ರಾಮಾಣಿಕವಾಗಿ
ಮಾತನಾಡಿ 
# ಕೆಲಸಗಾರರೊಂದಿಗೆ ಸೌಜನ್ಯದಿಂದ   ಮಾತನಾಡಿ
# ರಾಜಕಾರಣಿಗಳೊಂದಿಗೆ ಎಚ್ಚರಿಕೆಯಿಂದ
ಮಾತನಾಡಿ
# ದೇವರೊಂದಿಗೆ ಮೌನವಾಗಿ
ಮಾತನಾಡಿ

Friday 8 April 2016

ಅಪ್ಪ ಅಮರ !


ಅಪ್ಪ ಮಕ್ಕಳ  ನಡುವಿನ ಅನುಭಂದ  ಅನನ್ಯವಾದದ್ದು. ಅಕ್ಷರಗಳಿಗೆ ನಿಲುಕದ ಭಾವ ಬಾಂದಳದ ನಕ್ಷತ್ರದಂತಹದ್ದು. ಮಕ್ಕಳು ಹುಟ್ಟಿದಾಗಿಂದ ಬೆಳೆದು ದೊಡ್ಡವನರಾಗಿ ಮತ್ತೆ ಅವರೂ ಅಪ್ಪನಾಗುವ ಸಂಬ್ರಮ ನೊಡಿ ಸಂತೋಷ ಪಡುವ ಅಪ್ಪ ತನ್ನ ಕೊನೆಯ ದಿನಗಳನ್ನು ಮಕ್ಕಳ ಮತ್ತು ಮೊಮ್ಮಕ್ಕಳ ಜೊತೆ  ಕಾಲ ಕಳೆಯುವ ಮುನ್ನವೇ ಕಾಲವಾದ ದಿನಕ್ಕಿಂತ ದುಖದ, ಎದೆ ಬಿರಿಯುವ, ಮನಸು ಭಾರವಾಗುವ, ಹೃದಯ ಹಿಂಜುವ ಘೋರ ದಿನ ಮತ್ತೊಂದಿರರದು .

ಯುಗಾದಿಯ ಬೇವು ಬೆಲ್ಲದ ಮಿಶ್ರಣ ಸವಿಯುವ ದಿನ ಬರಿ ಬೇವಿನ ಕಹಿಯನ್ನೇ ಕೊಟ್ಟು ಅಪ್ಪ ನಮ್ಮನೆಲ್ಲ ಬಿಟ್ಟು ಹೋದ ನೋವು, ಮತ್ತೆ ಬರುವ ಯಾವ ಯುಗಾದಿಯು ನನ್ನ ಜೀವನದಲ್ಲಿ ಸಿಹಿಯನ್ನು  ನೆನಪಿಸಲಾರವು.

೮-೪-೨೦೧೬ ಇದು 'ಅಪ್ಪನ ದಿನ' ಇಂದು ಅಪ್ಪ ನಮ್ಮನೆಲ್ಲ ಅಗಲಿ ಬಾರದ ಲೋಕಕ್ಕೆ ಒಂದು ಕೊನೆಯ ಮಾತು ಹೇಳಲಾಗದೆ ಬಿಕ್ಕಳಿಸುತ್ತ ನಿಟ್ಟುಸಿರಿನ ನಡುವೆ ಉಸಿರು ನಿಲ್ಲಿಸಿದರು.  ಅವರು ಇರುವಾಗ ಎಂದೂ ತನ್ನ ಇಷ್ಟ - ಕಷ್ಟ ಹೇಳಿಕೊಂಡವರಲ್ಲ, ಬದಲಾಗಿ ಮಕ್ಕಳ ಬಗ್ಗೆ ಮರುಗಿದವರು. ಅವರ ಕಷ್ಟ  ಕಂಡು ಕೊರಗಿದವರು. ಇನ್ನು ಯಾರು ಅಪ್ಪನ ಜಾಗ ತುಂಬಿಯಾರು? ಅಪ್ಪನಿಗೆ ಅಪ್ಪನೇ ಸಾಟಿ, ಅಪ್ಪನಿಗೆ 'ಅಲ್ಟರ್ನೆಟ್'  ಎಲ್ಲಿದೆ.. ಎಲ್ಲೂ ಎಂದೂ ಉತ್ತರವಿರದ ಪ್ರಶ್ನೆ (?)
ಅಪ್ಪ ಇಂದು ಮೌನ ವೃತ, ಮುಂದಿನ ಯುಗಾದಿಗಳು ಕೇವಲ ಕಹಿ ಮಾತ್ರ.
ಅಪ್ಪನಿಗಾಗಿ ಮಾಡಬೇಕೆಂದುಕೊಂಡ ಎಲ್ಲ ಕೆಲಸಗಳು ಸಮಾದಿ.
ಇದು ನನಗೆ ದಕ್ಕಿದ ಯುಗಾದಿ.
ಆ ವಿಧಿಯ ಎದುರಿಗೆ ನಿಂತು ಹೀಗ್ಯಾಕೆ ಮಾಡಿದೆ ?
ಎಂದು ಕೇಳುವ ಧೈರ್ಯ ಯಾರಿಗಿದೆ?

ಅಪ್ಪ ಬೆನ್ನಿಗಿದ್ದ ನಾನು ಮುಂದೆ ಹೋಗುತಿದ್ದೆ, ಇಂದು ನಮ್ಮನ್ನೆಲ್ಲ ಬಿಟ್ಟು ಹಿಂದೆ ಉಳಿದುಬಿಟ್ಟ.
ಅಪ್ಪನೇನೋ ತನ್ನ ಬಕುಕಿನ ದಡ ತಲುಪಿಬಿಟ್ಟ.
ಆದರೆ ಅಪ್ಪ ಬಿಟ್ಟುಹೋದ ಮನೆಯವರನ್ನು ಹೊತ್ತು ನಾನು ಹೊರಡಲೇಬೇಕು ಬದುಕಿನ ನಾವೆಯಲಿ ನಾಳೆಯ ತುತ್ತಿನ ಶೋಧದಲಿ.
'ಅಪ್ಪ' ಇನ್ನೇನಿದ್ದರೂ ನನ್ನ ಸ್ಮುತಿಪಟಲದ ಚಿತ್ರ; ಎದೆ ಭಾರವಾದಾಗ ಜಿನುಗುವ ಕಣ್ಣಂಚಿನ ಹನಿ; ನೆನಪು ಕಾಡಿದಾಗ ಸದಾ ಕಣ್ಣಾಲೆಯಲಿ ತೇಲುತ್ತ ಸಾಗುವ ನೆನಪಿನ ದೋಣಿ.
ನಿನ್ನ ತ್ಯಾಗ, ಶಾಂತ ಗುಣ ನನಗೆ ಆದರ್ಶ ಮತ್ತು ಸ್ಪೂರ್ತಿ, ಎಂದೆಂದಿಗೂ ಅಪ್ಪ
ನನ್ನ ಬದುಕಿನ ದಾರಿ ದೀಪ.

ಎಲ್ಲೋ ಓದಿದ "ಅಪ್ಪನೆಂಬ ಅದ್ಭುತ" ಕವಿತೆಯೊಂದು ನೆನಪಾಗುತಿದೆ. ಯಾರು ಬರೆದ ಕವಿತೆಯೋ ಗೊತ್ತಿಲ್ಲ...ಆ ಕವಿಯ ಕ್ರಪೆ ಕೊರುತ್ರ ಅಪ್ಪನ ಬಗ್ಗೆ ಬರೆದ ಭಾವಲಹರಿ ನನ್ನ ಭಾವಕ್ಕೂ  ತುಂಬಾ ಹತ್ತಿರ ಎನ್ನುವ ಕಾರಣಕ್ಕೆ ಇಲ್ಲಿ ಹಂಚಿಕೊಳ್ಳುತ್ತಿದ್ದೆನೆ ಅಪ್ಪನ ನೆನಪಿನಲ್ಲಿ.

ಅದಕ್ಕೂ ಮುನ್ನ ಅಪ್ಪನಿಗೆ ಹೇಳದೆ ಉಳಿದ  ನಾಲ್ಕು ಮಾತುಗಳು ಹೇಳಬೆಕೆನಿಸುತಿದೆ .
"ಅಪ್ಪಾ ಯು ಆರ್ ಗ್ರೇಟ್
ಬಟ್ ಐಯಮ್ ಟೂ ಲೇಟ್,
ಅಪ್ಪಾ ಐಯಮ್ ಸೊ ಸಾರೀ
ಪ್ಲೀಸ್ ಫಾರ್ಗಿವ್ ಮಿ ಕೊನೆಯ ಬಾರಿ"

ಅಪ್ಪಾ ಈ ತಪ್ಪೋಪಿಕೆ ಒಪ್ಪಿಸಿಕೊ.
ಇದೆಲ್ಲವೂ ನಾನು ಮಾಡಿದ ತಪ್ಪಿಗೆ ಮತ್ತೆ ನಿನಗಾಗಿ ಮಾಡದೆ ಉಳಿದ ಕೆಲಸಗಳಿಗೆ.
ಮತ್ತೆ ಕ್ಷಮಿಸು, ಮನ್ನಿಸು ಹಾಗೆ ಎಂದಿನಂತೆ
ಹರಸು ಈ ನಿನ್ನ ಮಗನಿಗೆ.
......................................................................
"ಅಪ್ಪನೆಂಬ ಅದ್ಭುತ"
----------------------------
ಅಮ್ಮನ ಕಂಬನಿ
ಕಂಡಷ್ಟು ನಮಗೆ
ಅಪ್ಪನ ಬೆವರಹನಿ
ಕಾಣುವುದೇ ಇಲ್ಲ..!

ಅಪ್ಪನೆಂದರೆ ನಮ್ಮ
ಮನೆಯ ಕಾಮಧೇನು !
ಬೇಡಿದ್ದೆಲ್ಲ ನೀಡಲೇ
ಬೇಕಾದ ಕಲ್ಪವೃಕ್ಷ !

ಅಪ್ಪ ಅತ್ತಿದ್ದು..
ಕಂಡವರು ಕಡಿಮೆ !
ಅಪ್ಪ ನೋವುಗಳಿಲ್ಲದ
ಸಮಚಿತ್ತ ಸರದಾರ !

ಹಬ್ಬ ಸಂತಸಗಳಲಿ
ರೇಷ್ಮೆಸೀರೆ ಹೊಸಬಟ್ಟೆ
ತೊಡಿಸಿ ಸಂಭ್ರಮಿಸುವ
ಅಪ್ಪನುಡುಗೆ ಗಮನಿಸಿದವರಾರು?!

ಧರೆಯ ನಿತ್ಯ ಪೊರೆವ
ಅಂಬರದಂತೆ ತಂದೆ
ಸತಿಸುತರ ಹಗಲಿರುಳು
ಕಾಯ್ವ ವಾತ್ಸಲ್ಯಧಾರೆ !

ಅಮ್ಮನ ಮಡಿಲಿಂದ
ಕೈಹಿಡಿದು ನಮ್ಮನ್ನೆಲ್ಲ
ಹೆಗಲಿಗೇರಿಸಿ ಲೋಕ
ತೋರಿಸಿದ ಮಾರ್ಗದರ್ಶಕ !

ನೋವು-ಬೇವು ನಿರಾಸೆ
ಸಂಸಾರದೊತ್ತಡಗಳ..
ಹಾಲಾಹಲವನೆಲ್ಲ ನುಂಗಿ
ನಗುವ ನೀಲಕಂಠ !

ಅಮ್ಮನೆಂದರೆ ಮಮತೆ !
ಅಪ್ಪನೆಂದರೆ ಭದ್ರತೆ !
ಸದಾ ಮಡದಿ-ಮಕ್ಕಳ
ಭವಿಷ್ಯಕಾಗಿ
ಮುಡುಪಿಟ್ಟು ಬೆಳಗುವ
ಕರ್ಪೂರದ ಹಣತೆ !

ಹಬ್ಬಕ್ಕೆ  ಹೊಸ ಬಟ್ಟೆ ಕೊಡಿಸಿ
ಸಂಬ್ರಮಿಸುತಿದ್ದ ಅಪ್ಪನ
ಮೈಯ ಮೇಲಿದ್ದ ಹರಿದ ಬನಿಯನ್
ಯಾರಿಗೂ ಕಾಣಲೇಯಿಲ್ಲ!

ಹೊಸ ಚಪ್ಪಲಿ ಶೂ ಹಾಕಿಸಿ
ಶಾಲೆಗೆ ಕಳಿಸುವಾಗ
ಅಪ್ಪನ ಹವಾಯಿ ಚಪ್ಪಲಿ
ಎಂದೋ ಹರಿದು ಹೋದದ್ದು
ಗೊಚರಿಸಲೇ ಇಲ್ಲ!

ಕೂಡಿ ಉಣುವಾಗ ಎಲ್ಲರಿಗೂ ತೃಪ್ತಿಯಾಗಲಿ
ಎಂದು ಅರ್ಧ ಹೊಟ್ಟೆಯಲ್ಲೇ ಕೈತೊಳೆದ
ಅಪ್ಪನ ಹಸಿವು ತಿಳಿಯಲೇ ಇಲ್ಲ!

ಮಗಳು ತವರು ಬಿಡುವಾಗ
ಅಮ್ಮನ ಕಣ್ಣೀರ ಮುಂದೆ
ಅಪ್ಪನ ಗಟ್ಟಿ ಎದೆ ಬಿರಿದು ಮೌನವಾದದ್ದು ಗೊತ್ತಾಗಲೇ ಇಲ್ಲ!

ಅವ್ವನ ಮಮತೆಯ ಒರತೆಯಲಿ
ಅಪ್ಪನ ಬೆವರು ಉಕ್ಕಿದ್ದು
ತಿಳಿಯಲೇ ಇಲ್ಲ
ಎದೆಯಾಳದ ಬಿಗಿತ
ಗೊಚರಿಸಲೇ ಇಲ್ಲ.



Sunday 10 May 2015

ಅಮ್ಮಂದಿರ ದಿನ


ಸ್ನೇಹಿತರೆ,
ಇವತ್ತು ವಿಶ್ವ ಅಮ್ಮಂದಿರ ದಿನ. ಅಮ್ಮನ ತ್ಯಾಗ, ಹೃದಯ ವೈಶಾಲ್ಯತೆ, ಎಂದೆಂದಿಗೂ ಬತ್ತದ ಮಮತೆ...ಹೀಗೆ ಅವಳ ಹಿರಿಮೆ ಗರಿಮೆಯನ್ನೆಲ್ಲ ಸ್ಮರಿಸುತ್ತಿರುವ ಸಂಧರ್ಬದಲ್ಲಿ 'ಅಮ್ಮ' ಅನನ್ಯತೆಯ ಬಿಂಬಿಸುವ ಕೆಲವು ಪುಟ್ಟ ಕವಿತೆಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಓದಿ, ನಿಮಗೆ ಮೆಚ್ಚುಗೆಯಾದರೆ ಪ್ರತಿಕ್ರಿಯಿಸಿ. ಹಾಗೆ ಕೊನೆಗೆ ನನ್ನದೊಂದು ಮಾತು  ಮತ್ತು  ವಿನಂತಿ - ಅಮ್ಮನ ಬಗ್ಗೆ ಇಷ್ಟೊಂದು ಒಳ್ಳೆಯ ಅಭಿಪ್ರಾಯ ಹೊಂದಿರುವ ನಾವು ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಮತ್ತು ಕರ್ತವ್ಯವನ್ನು ಎಂದಿಗೂ ಮರೆಯಬಾರದು ಅಲ್ಲವೇ? ಇಂದು  ಎಷ್ಟೋ ಅಮ್ಮಂದಿರು ಬೀದಿಯಲ್ಲಿ, ಆಶ್ರಮಗಳಲ್ಲಿ. ಮತ್ತ್ಯಾರದೋ ಹಂಗಿನ ಮನೆಯಲ್ಲಿ ಮಕ್ಕಳಿದ್ದು ಅನಾಥವಾಗಿ ದಯನಿಯವಾದ ಬದುಕನ್ನು ಸವೆಸುತ್ತಿರುವುದು ಕಂಡು ಮಾತನ್ನು ಹೇಳಬೇಕೆನಿಸಿತು ಅಷ್ಟೇ !
 

ಒಲವು ಗಳೊಂದಿಗೆ,
ಇಂತಿ ನಿಮ್ಮವನು
ಶಿವಕುಮಾರ್ ಕಿನ್ನಿ




 
 


Saturday 14 February 2015

ಪ್ರೀತಿ: ಜೀವನ ತತ್ವ ಮತ್ತು ಸತ್ವ


ಸ್ನೇಹಿತರೆ, ಪ್ರೀತಿ ಒಂದು ದಿನದ ಆಚರಣೆ ಅಲ್ಲ. ತೋರಿಕೆಯೂ  ಅಲ್ಲ.  ಅದು ನಮ್ಮ  ಜೀವನದ  ತತ್ವ  ಮತ್ತು  ಸತ್ವ. ಬದುಕಿಗೆ ಗಾಳಿ-ನೀರು- ಆಹಾರ ಎಷ್ಟು ಮುಖ್ಯವೋ ಪ್ರೀತಿ ಅಷ್ಟೆ  ಅನಿವಾರ್ಯ. ಪ್ರೀತಿ-  ಅನಂತ, ಅನನ್ಯ, ಅನುಪಮ  ಅನುಭೂತಿ. ಆದರೆ ಇಂದು ಪ್ರೀತಿ- ಪ್ರೇಮ ಯುವಜನತೆಯ ನಡುವೆ ಘಟಿಸುವ ತೋರಿಕೆಯ ವ್ಯಾಪಾರಿ  ಮನೋಭಾವನೆಯ  ಅಸಭ್ಯ ವರ್ತನೆಯ  ಸಾಂಕೇತಿಕ  ಸಾರ್ವಜನಿಕ  ಆಚರಣೆಯ  ಸ್ವರೂಪ  ಪಡೆಯುತ್ತಿರುದು  ದುರದುಷ್ಟಕರ
ಪ್ರೀತಿ ಬದುಕಾಗಲಿ, ಇನ್ನೊ೦ದು ಜೀವಕೆ ಬೆಳಕಾಗಲಿ,  ನಂದಾದೀಪವಾಗಿ  ಚಿರಕಾಲವಿರಲಿ.  ನಿಮ್ಮ  ಪ್ರೀತಿಗೆ ಎಂದೆಂದಿಗೂ ಜಯವಾಗಲಿ.  ಎಲ್ಲರಿಗೂ 'ಪ್ರೀತಿಯ ದಿನ' ಶುಭಾಶಯಗಳು !

ಪ್ರೀತಿಯ  ಕುರಿತು  ಬರೆದ  ಕೆಲವು  ಹನಿಗವಿತೆ  ಇಲ್ಲಿ  ಹಂಚಿಕೊಂಡಿದ್ದೇನೆ  ಓದಿ ಪ್ರತಿಕ್ರಿಯಿಸಿ .  
ಒಲವು ಗಳೊಂದಿಗೆ,
ಇಂತಿ ನಿಮ್ಮವನು
ಶಿವಕುಮಾರ್ ಕಿನ್ನಿ











Saturday 7 February 2015

ಬದುಕೇ ನಿಧಾನವಾಗಿ ನಡೆ

ಬದುಕೇ ನಿಧಾನವಾಗಿ ನಡೆ
('ಆಯಿಸ್ತಾ ಚಲ್ ಜಿಂದಗಿ' ಎಂಬಹಿಂದಿ ಕವಿತೆಯ ಕನ್ನಡ ಭಾವಾನುವಾದ)
........................................................................
ನಿಧಾನವಾಗಿ ನಡೆ ಬದುಕೇ ಇನ್ನೂ ಕಡ ತೀರಿಸುವುದು ಬಾಕಿ ಉಳಿದಿದೆ.
ಕೆಲವು ನೋವುಗಳನ್ನು ಅಳಿಸುವುದಿದೆ, ಕೆಲವು ಕರ್ತವ್ಯಗಳನ್ನು ನಿಭಾಯಿಸುವುದಿದೆ.
ನಿನ್ನ ಶರವೇಗದ ನಡೆಗೆ ಕೆಲವು ಮುನಿಸಿಕೊಂಡಿವೆ ಕೆಲವು ಕೈತಪ್ಪಿ ಹೋಗಿವೆ.
ಮುನಿಸಿಕೊಂಡವುಗಳಿಗೆ ಒಲಿಸಿಕೊಳ್ಳುವುದಿದೆ ಅಳುವಿಗೆ ನಗಿಸುವುದು ಹಾಗೆ ಉಳಿದಿದೆ.
ಕೆಲವು ಈಡೆರದ ಇಚ್ಚೆಗಳು, ಕೆಲವು ಮಾಡದೇ ಉಳಿದ ಮುಖ್ಯ ಕೆಲಸಗಳಿವೆ.
ಎದೆಯಲ್ಲೇ ಸತ್ತುಹೋದ ಆಸೆಗಳಿಗೆ ಸಮಾದಿ ಮಾಡುವುದಿದೆ.
ಕೆಲವು ಸಂಭಂದಗಳು ಒಡೆದು ಹೋಗಿವೆ, ಮತ್ತೆ ಕೆಲವು ಕೂಡುತ್ತ ಕೂಡುತ್ತ ಕಳಚಿ ಕೊಂಡಿವೆ.
ಒಡೆದ-ಕಳಚಿ ಕೊಂಡ ಸಂಭಂದದ ಗಾಯಗಳಿಗೆ ಅಳಿಸುವುದಿದೆ.
ನಿ ಮುಂದೆ ನಡೆ ನಾ ಬರುತ್ತೇನೆ ನಿನ್ನ ಬಿಟ್ಟು ನಾನು ಹೇಗೆ ಬದುಕಲಿ?
ಈ ಉಸಿರ ಮೇಲೆ ಯಾರ ಹಕ್ಕಿದೆಯೋ ಅವರಿಗೆ ತಿಳಿಸುವುದು ಬಾಕಿ ಇದೆ.
ನಿಧಾನವಾಗಿ ಸಾಗು ಬದುಕೇ ಇನ್ನೂ ಎಷ್ಟೋ ಕಡಗಳನ್ನು ತೀರಿಸುವುದು ಹಾಗೆ ಉಳಿದಿದೆ.



Thursday 5 February 2015

ಬದುಕು-ಬೇಸರ

ಇಂದು ನಾವು ತುಂಬಾ ಸುಲಭವಾಗಿ ಮತ್ತು ಬಹು ಬೇಗ ಅನೇಕ ಸಂಗತಿಗಳಿಗೆ ಸಂಭಂದಿಸಿದಂತೆ 'ಬೇಸರ' ಮಾಡಿಕೊಂಡು ಬಿಡುತ್ತಿದ್ದೇವೆ. ಮೊಬೈಲು, ಕಾರು, ನೌಕರಿ, ಸಂಗಾತಿ, ಹತ್ತಿರದವರು ಹಾಗೆ ಬದುಕು !
ನಮ್ಮ ಮೂಲ ಸಮಸ್ಸೆಯೆಂದರೆ ತುಂಬಾ ಬೇಗ 'ತಾಳ್ಮೆ' ಇಲ್ಲದವರಾಗಿ ಬಿಡುತ್ತಿದ್ದೇವೆ. ಜೀವನದ ಹೆಜ್ಜೆ ಹೆಜ್ಜೆಗೂ ನಮಗೆ 'ಹೊಸತು' ಬೇಕು. ಸತ್ಯವೇನೆಂದರೆ ವಾಸ್ತವವಾಗಿ ಇದು ಸಾಧ್ಯವಿಲ್ಲ. ಈ ತೆರನಾದ ನಿರೀಕ್ಷೆಯ ಬದುಕು ಕೇವಲ ಸಮಸ್ಸೆಗಳನ್ನು ತರುತ್ತೆ ಮತ್ತು ನಮ್ಮನ್ನು ದುಖಿತರನ್ನಾಗಿ ಮಾಡುತ್ತೆ.
'ತಾಳ್ಮೆ' ಎಂಬುದು ಯಾವತ್ತಿಗೂ ಗಟ್ಟಿಯಾದ ಸದ್ಗುಣ . ಇವತ್ತಿನ ಸಂಧರ್ಭದಲ್ಲಿ ಇದು ತುಂಬಾ ಮಹತ್ತ್ವವಾದದ್ದು. ನಿಜಕ್ಕೂ ಬದುಕಿಗೆ ಏನು ಅಗತ್ಯವೋ ಅದರ ಬೆನ್ನು ಹತ್ತಿ ಹೋಗಬೇಕು. ಎಲ್ಲದಕ್ಕೂ ಬರಿ ಬೇಕು, ಬೇಕು... ಅಂತ ಎಲ್ಲದರ ಹಿಂದೆ ಓಡುತ್ತ ಹೋದರೆ ಮುಂದೆ ನಮಗೆ ಯಾವ ಜಾಗ ತಾನೇ ಉಳಿಯುತ್ತದೆ ಹೇಳಿ ?
ಅದಕ್ಕಾಗಿ ನಮ್ಮ ಹತ್ತಿರ ಏನಿದೆಯೋ ಅದನ್ನು ಆನಂದಿಸೋಣ ಹಾಗೆ ಉಳಿಸಿಕೊಳ್ಳೋಣ ಅಲ್ಲವೇ ?