Wednesday 31 December 2014

ಹೊಸ ವರ್ಷ ೨೦೧೫ ಶುಭಾಶಯಗಳು !

ಹೊಸವರ್ಷದ ಹೊಸ್ತಿಲಲ್ಲಿ ನಿಂತು ಒಂದಿಷ್ಟು ಹೊತ್ತು.....

 ಹಿಂತಿರುಗಿ ನೋಡುತ್ತಾ ಹೋದಾಗ ಕಾಲವೆಂಬ ಹಳಿಯಮೇಲೆ ಬದುಕಿನ ಬಂಡಿ ಸಾಗಿ ಬಂದು 'ವರ್ಷ'ವೆಂಬ ಮೈಲಿಗಲ್ಲು ತಲುಪಿರುತ್ತದೆ. ಈ ವರ್ಷದ ಅನುಭವಗಳು ಒಂದು ಹೊತ್ತು ಕಣ್ಮುಂದೆ ಬಂದು ನಿಲ್ಲುತ್ತವೆ. ಅಲ್ಲಿ ...
- ಕೈಗೂ ಡದ ಕನಸು, ಇಡೆರದ ಆಸೆ, ನಿರರ್ಥಕ, ಹತಾಶೆಯ ಭಾವ, ಸೋಲಿನ, ನೋವಿನ, ಕಷ್ಟಗಳ ಕಾಡುವ ನೆನಪುಗಳಿವೆ...
- ನನಸಾದ ನಿರೀಕ್ಷೆ, ಹುಸಿಯಾಗದ ಕನಸು, ಸಾರ್ಥಕ ಭಾವ, ಗೆಲುವಿನ, ನಲಿವಿನ, ಸುಖಗಳ ಸಿಹಿ ಸ್ಮರಣೆಗಳಿವೆ..
ಬಂದುಕೆಂದರೆ ಇವೆಲ್ಲವುಗಳ ಅನುಭವದ ಮಿಶ್ರಣವಲ್ಲವೆ?

ಎಡವಿದ ಹೆಜ್ಜೆ ಗುರುತು ಪಾಠ ಮತ್ತು ಸಾಧಿಸಿದ ಮೈಲು ಪ್ರೇರಣೆ. ಈ ಎರಡೂ
ನಾಳೆಗಳ ನಮ್ಮ ನಡಿಗೆಗೆ ದಾರಿಯ ದಿವಿಗೆಯಾಗಲಿ.
ಹೊಸ ಬದುಕಿನ ಮತ್ತೊಂದು ಪರ್ವಕ್ಕೆ ಬರಮಾಡಿಕೊಳ್ಳುತ್ತ ನೂತನ ವರ್ಷವನ್ನು ಸ್ವಾಗತಿಸೋಣ.

ಎಲ್ಲರಿಗೂ ಹೊಸ ವರ್ಷ ೨೦೧೫ ಶುಭಾಶಯಗಳು !
ಶಾಂತಿ, ನೆಮ್ಮದಿ, ಆರೋಗ್ಯ, ಭಾಗ್ಯ, ಯಶಸ್ಸು, ಸಮ್ರುದ್ದಿ.. ನೆರವೇರಿದ ಬದುಕು ಎಲ್ಲರದ್ದಾಗಲಿ.
ಎಲ್ಲರಿಗೂ ಒಳ್ಳೆಯದಾಗಲಿ; ಎಲ್ಲರೂ ಒಳ್ಳೆಯವರಾಗಿರೊಣ.

'ಸರ್ವೇಜನಾ ಸುಖಿನೋಭವಂತು'

Wednesday 24 December 2014

ಮೇರಿ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು

ನನ್ನ ಎಲ್ಲಾ ಕ್ರೈಸ್ತ ಬಾಂಧವರಿಗೆ/ ಸ್ನೇಹಿತರಿಗೆ,
ಮೇರಿ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು !
ದೇವರು ಎಲ್ಲರಿಗೂ ಪ್ರೀತಿ, ಸುಖ, ಶಾಂತಿ - ನೆಮ್ಮದಿಗಳನ್ನು ದಯಪಾಲಿಸಲಿ. ಎಲ್ಲರಲ್ಲೂ ಭ್ರಾತೃತ್ವದ ಭಾವ ಇಮ್ಮಡಿಯಾಗಿ ಸಹಬಾಳ್ವೆಯ ಬದುಕು ಮತ್ತಷ್ಟು ಅರ್ಥಪೂರ್ಣವಾಗಲಿ.
.............

I Wish a Happy MERY CHRISTMAS ! - to all my christian friends/relatives.
May god fill their life with Love, Prosperity and Peace. Let us lead and live life of fraternity to make our livings still more meaningful.
.............

Saturday 1 November 2014

‘ನವೆ೦ಬರ್ ಒಂದು, ನಾವೆಲ್ಲರೂ ಒ೦ದು’

 
‘ನವೆ೦ಬರ್ ಒಂದು, ನಾವೆಲ್ಲರೂ ಒ೦ದು’ಎನ್ನುವ ಸ೦ದೇಶ ನೆನಪಿಸುವ ದಿನ. ಕನ್ನಡಿಗರ ಏಕತೆ ಮತ್ತು ಸಮಗ್ರತೆಯ ಸಂಕೇತದ ಸುದಿನ. ಸುದಿನಕ್ಕೆ ಇಂದಿಗೆ ೫೯ (೪೧) ವರ್ಷಗಳು ಸ೦ದಿವೆ. ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಪ್ರತೀಕ ಕನ್ನಡಿಗರು ಎಂಬುದು ನಮ್ಮ ಹಿರಿಮೆ; ರಾಜ್ಯದ ಗರಿಮೆ. ಕನ್ನಡವೆಂಬುದು ಬರಿ ಭಾಷೆಯಲ್ಲ, ಕೇವಲ ನಾಡಲ್ಲ, ಕನ್ನಡ ನಮ್ಮ ಭಾವ, ಮನಸು ಮತ್ತು ಸಂಸ್ಕೃತಿ.

ವಿಶ್ವದ ಎಲ್ಲ ಕನ್ನಡದ ಮನಸ್ಸುಗಳಿಗೆ ಹಾಗು ಕನ್ನಡವನ್ನು ಪ್ರೀತಿಸುವ ಮತ್ತು ಗೌರವಿಸುವ ಎಲ್ಲ ಇತರ ಭಾರತೀಯ ಭಾಷಿಕರಿಗೂ 'ಕರ್ನಾಟಕ ರಾಜ್ಯೋತ್ಸವದ' ಶುಭಾಶಯಗಳು !
ಸಂಧರ್ಭದಲ್ಲಿ ನಾಡಿನ ಕುರಿತಾದ ನಮ್ಮ ಪ್ರಜ್ಞೆಯನ್ನು ಜಾಗ್ರತಗೊಳಿಸುವ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪಗೌಡ ಪುಟ್ಟಪ್ಪನವರ ಎರಡು ನಾಡ ಗೀತೆಗಳನ್ನು ಮೆಲುಕು ಹಾಕೋಣ.
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾ ನಂದ ಕಬೀರರ
ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
-
ಕುವೆಂಪು
"ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡ ಗೋವಿನ ಮುದ್ದಿನ ಕರು
ಕನ್ನಡತನವೊಂದಿದ್ದರೆ
ನೀನಮ್ಮಗೆ ಕಲ್ಪತರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ನೀ ಮುಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಪಂಪನೋದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಪಿಂಪಿನ ಬನವಾಸಿಗೆ ಕರಗುವ ಮನ
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
ಜೊಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಒಂಪುಳಿಹೋಗುವ ಮನ
ಕನ್ನದವೇ ಸತ್ಯ ಕನ್ನದವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಕಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸರೋಮಾಂಚನಗೊಳುವಾತನಾ ಮನ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್ ಕನ್ನಡವೇ
ಸತ್ಯ ಕನ್ನಡವೇ ನಿತ್ಯ
ಅನ್ಯವೆನಲದೇ ಮಿತ್ಯ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡವೇ ಸತ್ಯ ಕನ್ನಡವೇ ನಿತ್ಯ"
-
ಕುವೆಂಪು
****

Sunday 28 September 2014

ಭಗತ್ ಸಿಂಗ್ ಜನ್ಮದಿನ: ಭಾರತದ ದೇಶಭಕ್ತ ಮಗನಿಗೆ ನಮನ

ಭಗತ್ ಸಿಂಗ್ ಜನ್ಮದಿನ: ಭಾರತದ ದೇಶಭಕ್ತ ಮಗನಿಗೆ ನಮನ

 
ಧೀರ ಮತ್ತು ಅಪ್ಪಟ ದೇಶಾಭಿಮಾನಿಯಾಗಿದ್ದ ಭಾರತದ ಮಹಾನ್ ಮಗನಿಗೆ ನಮಿಸೋಣ. ಕನಿಷ್ಟ ದಿನವಾದರೂ ಅವರ ತ್ಯಾಗ ಬಲಿದಾನವನ್ನು ನೆನೆಯೋಣ. ಇಂದು ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಇವರ ಕುರಿತು ಎಷ್ಟು ಹೇಳುತ್ತಿದ್ದಾರೋ ಗೊತ್ತಿಲ್ಲ. ಬನ್ನಿ ಇವರ ಬಗ್ಗೆ ಒಂದಿಷ್ಟು ತಿಳಿಹೇಳೋಣ ಇನ್ನು ಹೆಚ್ಚಿಗೆ ನಾವು ತಿಳಿದುಕೊಳ್ಳೋಣ. ಇವತ್ತು ಕ್ರಮೇಣ ಕೇವಲ ಕ್ರಿಕೆಟರ್ಸ್, ಎಕ್ಟರ್ಸ್, ಪಾಲಿಟಿಸಿಯನ್ಸ್ ಮತ್ತು ಇತರ ಸೆಲೆಬ್ರಿಟಿಗಳೇ ನಮ್ಮ ಮುಂದಿನ ಪೀಳಿಗೆಯ ಆದರ್ಶವಾಗಿ ಬಿಡುವ ಅಪಾಯವೇ ಹೆಚ್ಚಿರುವ ಸಂಧರ್ಭದಲ್ಲಿ ನಿಜವಾಗಿ ಆದರ್ಶವಾಗಬೇಕಿರುವ ದೇಶಾಭಿಮಾನಿಗಳ, ಸ್ವಾತಂತ್ರ್ಯ ಯೋಧರ ಮತ್ತು ಸೈನಿಕರ ಕುರಿತ ಕಥೆಗಳನ್ನು ಹೇಳುವ ಅವಶ್ಯಕತೆಯಿದೆ.