Friday 11 July 2014


ಆಫ್ರಿಕನ್ ಬಾಲಕನೊಬ್ಬನ 'ಕಲರ್ಡ್'(colored) ಎಂಬ ಕವಿತೆಯ ಕನ್ನಡ ಭಾವಾನುವಾದ ಇಲ್ಲಿದೆ .
(
ಇದು '೨೦೦೫ ಉತ್ತಮ ಕವಿತೆ 'ಗೆ ನಾಮನಿರ್ದೆಶನಗೊಂಡಿತ್ತು )

'ಬಣ್ಣ'
ನಾನು ಹುಟ್ಟಿದಾಗ ಕಪ್ಪು ...
ನಾನು ಬೆಳೆಯುವಾಗಲೂ ಕಪ್ಪು
ನಾನು ಬಿಸಿಲಿನಲ್ಲಿದ್ದಾಗಲೂ ಕಪ್ಪು
ನಾನು ಭಯಬಿದ್ದಾಗಲೂ ಕಪ್ಪು
ನಾನು ಕಾಯಿಲೆ ಬಿದ್ದಾಗಲೂ ಕಪ್ಪು
ಮತ್ತೆ
ನಾನು ಸಾಯುವತನಕ ಕಪ್ಪು.
ಆದರೆ
ನೀನು ಬಿಳಿಯ ಸಹವರ್ತಿಯೇ,
ನೀನು ಹುಟ್ಟಿದಾಗ ಗುಲಾಬಿ
ನೀನು ಬೆಳೆಯುವಾಗ ಬಿಳಿ
ನೀನು ಬಿಸಿಲಿನಲ್ಲಿ ಕೆಂಪು
ನೀನು ತಂಪಿನಲ್ಲಿ ನೀಲಿ
ನೀನು ಭಯಬಿದ್ದಾಗ ಹಳದಿ
ನೀನು ಕಾಯಿಲೆ ಬಿದ್ದಾಗ ಹಸಿರು
ನೀನು ಸಾಯುವಾಗ ಬೂದು ಬಣ್ಣ .
ಮತ್ತೆ ನೀನು ನನ್ನನ್ನೇ 'ಬಣ್ಣದವ' ನೆಂದು
ಕರೆಯುತ್ತಿ!
·         ಶಿವಕುಮಾರ್  ಕಿನ್ನಿ