Saturday 14 February 2015

ಪ್ರೀತಿ: ಜೀವನ ತತ್ವ ಮತ್ತು ಸತ್ವ


ಸ್ನೇಹಿತರೆ, ಪ್ರೀತಿ ಒಂದು ದಿನದ ಆಚರಣೆ ಅಲ್ಲ. ತೋರಿಕೆಯೂ  ಅಲ್ಲ.  ಅದು ನಮ್ಮ  ಜೀವನದ  ತತ್ವ  ಮತ್ತು  ಸತ್ವ. ಬದುಕಿಗೆ ಗಾಳಿ-ನೀರು- ಆಹಾರ ಎಷ್ಟು ಮುಖ್ಯವೋ ಪ್ರೀತಿ ಅಷ್ಟೆ  ಅನಿವಾರ್ಯ. ಪ್ರೀತಿ-  ಅನಂತ, ಅನನ್ಯ, ಅನುಪಮ  ಅನುಭೂತಿ. ಆದರೆ ಇಂದು ಪ್ರೀತಿ- ಪ್ರೇಮ ಯುವಜನತೆಯ ನಡುವೆ ಘಟಿಸುವ ತೋರಿಕೆಯ ವ್ಯಾಪಾರಿ  ಮನೋಭಾವನೆಯ  ಅಸಭ್ಯ ವರ್ತನೆಯ  ಸಾಂಕೇತಿಕ  ಸಾರ್ವಜನಿಕ  ಆಚರಣೆಯ  ಸ್ವರೂಪ  ಪಡೆಯುತ್ತಿರುದು  ದುರದುಷ್ಟಕರ
ಪ್ರೀತಿ ಬದುಕಾಗಲಿ, ಇನ್ನೊ೦ದು ಜೀವಕೆ ಬೆಳಕಾಗಲಿ,  ನಂದಾದೀಪವಾಗಿ  ಚಿರಕಾಲವಿರಲಿ.  ನಿಮ್ಮ  ಪ್ರೀತಿಗೆ ಎಂದೆಂದಿಗೂ ಜಯವಾಗಲಿ.  ಎಲ್ಲರಿಗೂ 'ಪ್ರೀತಿಯ ದಿನ' ಶುಭಾಶಯಗಳು !

ಪ್ರೀತಿಯ  ಕುರಿತು  ಬರೆದ  ಕೆಲವು  ಹನಿಗವಿತೆ  ಇಲ್ಲಿ  ಹಂಚಿಕೊಂಡಿದ್ದೇನೆ  ಓದಿ ಪ್ರತಿಕ್ರಿಯಿಸಿ .  
ಒಲವು ಗಳೊಂದಿಗೆ,
ಇಂತಿ ನಿಮ್ಮವನು
ಶಿವಕುಮಾರ್ ಕಿನ್ನಿ











Saturday 7 February 2015

ಬದುಕೇ ನಿಧಾನವಾಗಿ ನಡೆ

ಬದುಕೇ ನಿಧಾನವಾಗಿ ನಡೆ
('ಆಯಿಸ್ತಾ ಚಲ್ ಜಿಂದಗಿ' ಎಂಬಹಿಂದಿ ಕವಿತೆಯ ಕನ್ನಡ ಭಾವಾನುವಾದ)
........................................................................
ನಿಧಾನವಾಗಿ ನಡೆ ಬದುಕೇ ಇನ್ನೂ ಕಡ ತೀರಿಸುವುದು ಬಾಕಿ ಉಳಿದಿದೆ.
ಕೆಲವು ನೋವುಗಳನ್ನು ಅಳಿಸುವುದಿದೆ, ಕೆಲವು ಕರ್ತವ್ಯಗಳನ್ನು ನಿಭಾಯಿಸುವುದಿದೆ.
ನಿನ್ನ ಶರವೇಗದ ನಡೆಗೆ ಕೆಲವು ಮುನಿಸಿಕೊಂಡಿವೆ ಕೆಲವು ಕೈತಪ್ಪಿ ಹೋಗಿವೆ.
ಮುನಿಸಿಕೊಂಡವುಗಳಿಗೆ ಒಲಿಸಿಕೊಳ್ಳುವುದಿದೆ ಅಳುವಿಗೆ ನಗಿಸುವುದು ಹಾಗೆ ಉಳಿದಿದೆ.
ಕೆಲವು ಈಡೆರದ ಇಚ್ಚೆಗಳು, ಕೆಲವು ಮಾಡದೇ ಉಳಿದ ಮುಖ್ಯ ಕೆಲಸಗಳಿವೆ.
ಎದೆಯಲ್ಲೇ ಸತ್ತುಹೋದ ಆಸೆಗಳಿಗೆ ಸಮಾದಿ ಮಾಡುವುದಿದೆ.
ಕೆಲವು ಸಂಭಂದಗಳು ಒಡೆದು ಹೋಗಿವೆ, ಮತ್ತೆ ಕೆಲವು ಕೂಡುತ್ತ ಕೂಡುತ್ತ ಕಳಚಿ ಕೊಂಡಿವೆ.
ಒಡೆದ-ಕಳಚಿ ಕೊಂಡ ಸಂಭಂದದ ಗಾಯಗಳಿಗೆ ಅಳಿಸುವುದಿದೆ.
ನಿ ಮುಂದೆ ನಡೆ ನಾ ಬರುತ್ತೇನೆ ನಿನ್ನ ಬಿಟ್ಟು ನಾನು ಹೇಗೆ ಬದುಕಲಿ?
ಈ ಉಸಿರ ಮೇಲೆ ಯಾರ ಹಕ್ಕಿದೆಯೋ ಅವರಿಗೆ ತಿಳಿಸುವುದು ಬಾಕಿ ಇದೆ.
ನಿಧಾನವಾಗಿ ಸಾಗು ಬದುಕೇ ಇನ್ನೂ ಎಷ್ಟೋ ಕಡಗಳನ್ನು ತೀರಿಸುವುದು ಹಾಗೆ ಉಳಿದಿದೆ.



Thursday 5 February 2015

ಬದುಕು-ಬೇಸರ

ಇಂದು ನಾವು ತುಂಬಾ ಸುಲಭವಾಗಿ ಮತ್ತು ಬಹು ಬೇಗ ಅನೇಕ ಸಂಗತಿಗಳಿಗೆ ಸಂಭಂದಿಸಿದಂತೆ 'ಬೇಸರ' ಮಾಡಿಕೊಂಡು ಬಿಡುತ್ತಿದ್ದೇವೆ. ಮೊಬೈಲು, ಕಾರು, ನೌಕರಿ, ಸಂಗಾತಿ, ಹತ್ತಿರದವರು ಹಾಗೆ ಬದುಕು !
ನಮ್ಮ ಮೂಲ ಸಮಸ್ಸೆಯೆಂದರೆ ತುಂಬಾ ಬೇಗ 'ತಾಳ್ಮೆ' ಇಲ್ಲದವರಾಗಿ ಬಿಡುತ್ತಿದ್ದೇವೆ. ಜೀವನದ ಹೆಜ್ಜೆ ಹೆಜ್ಜೆಗೂ ನಮಗೆ 'ಹೊಸತು' ಬೇಕು. ಸತ್ಯವೇನೆಂದರೆ ವಾಸ್ತವವಾಗಿ ಇದು ಸಾಧ್ಯವಿಲ್ಲ. ಈ ತೆರನಾದ ನಿರೀಕ್ಷೆಯ ಬದುಕು ಕೇವಲ ಸಮಸ್ಸೆಗಳನ್ನು ತರುತ್ತೆ ಮತ್ತು ನಮ್ಮನ್ನು ದುಖಿತರನ್ನಾಗಿ ಮಾಡುತ್ತೆ.
'ತಾಳ್ಮೆ' ಎಂಬುದು ಯಾವತ್ತಿಗೂ ಗಟ್ಟಿಯಾದ ಸದ್ಗುಣ . ಇವತ್ತಿನ ಸಂಧರ್ಭದಲ್ಲಿ ಇದು ತುಂಬಾ ಮಹತ್ತ್ವವಾದದ್ದು. ನಿಜಕ್ಕೂ ಬದುಕಿಗೆ ಏನು ಅಗತ್ಯವೋ ಅದರ ಬೆನ್ನು ಹತ್ತಿ ಹೋಗಬೇಕು. ಎಲ್ಲದಕ್ಕೂ ಬರಿ ಬೇಕು, ಬೇಕು... ಅಂತ ಎಲ್ಲದರ ಹಿಂದೆ ಓಡುತ್ತ ಹೋದರೆ ಮುಂದೆ ನಮಗೆ ಯಾವ ಜಾಗ ತಾನೇ ಉಳಿಯುತ್ತದೆ ಹೇಳಿ ?
ಅದಕ್ಕಾಗಿ ನಮ್ಮ ಹತ್ತಿರ ಏನಿದೆಯೋ ಅದನ್ನು ಆನಂದಿಸೋಣ ಹಾಗೆ ಉಳಿಸಿಕೊಳ್ಳೋಣ ಅಲ್ಲವೇ ?