Sunday 10 May 2015

ಅಮ್ಮಂದಿರ ದಿನ


ಸ್ನೇಹಿತರೆ,
ಇವತ್ತು ವಿಶ್ವ ಅಮ್ಮಂದಿರ ದಿನ. ಅಮ್ಮನ ತ್ಯಾಗ, ಹೃದಯ ವೈಶಾಲ್ಯತೆ, ಎಂದೆಂದಿಗೂ ಬತ್ತದ ಮಮತೆ...ಹೀಗೆ ಅವಳ ಹಿರಿಮೆ ಗರಿಮೆಯನ್ನೆಲ್ಲ ಸ್ಮರಿಸುತ್ತಿರುವ ಸಂಧರ್ಬದಲ್ಲಿ 'ಅಮ್ಮ' ಅನನ್ಯತೆಯ ಬಿಂಬಿಸುವ ಕೆಲವು ಪುಟ್ಟ ಕವಿತೆಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಓದಿ, ನಿಮಗೆ ಮೆಚ್ಚುಗೆಯಾದರೆ ಪ್ರತಿಕ್ರಿಯಿಸಿ. ಹಾಗೆ ಕೊನೆಗೆ ನನ್ನದೊಂದು ಮಾತು  ಮತ್ತು  ವಿನಂತಿ - ಅಮ್ಮನ ಬಗ್ಗೆ ಇಷ್ಟೊಂದು ಒಳ್ಳೆಯ ಅಭಿಪ್ರಾಯ ಹೊಂದಿರುವ ನಾವು ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಮತ್ತು ಕರ್ತವ್ಯವನ್ನು ಎಂದಿಗೂ ಮರೆಯಬಾರದು ಅಲ್ಲವೇ? ಇಂದು  ಎಷ್ಟೋ ಅಮ್ಮಂದಿರು ಬೀದಿಯಲ್ಲಿ, ಆಶ್ರಮಗಳಲ್ಲಿ. ಮತ್ತ್ಯಾರದೋ ಹಂಗಿನ ಮನೆಯಲ್ಲಿ ಮಕ್ಕಳಿದ್ದು ಅನಾಥವಾಗಿ ದಯನಿಯವಾದ ಬದುಕನ್ನು ಸವೆಸುತ್ತಿರುವುದು ಕಂಡು ಮಾತನ್ನು ಹೇಳಬೇಕೆನಿಸಿತು ಅಷ್ಟೇ !
 

ಒಲವು ಗಳೊಂದಿಗೆ,
ಇಂತಿ ನಿಮ್ಮವನು
ಶಿವಕುಮಾರ್ ಕಿನ್ನಿ




 
 


Saturday 14 February 2015

ಪ್ರೀತಿ: ಜೀವನ ತತ್ವ ಮತ್ತು ಸತ್ವ


ಸ್ನೇಹಿತರೆ, ಪ್ರೀತಿ ಒಂದು ದಿನದ ಆಚರಣೆ ಅಲ್ಲ. ತೋರಿಕೆಯೂ  ಅಲ್ಲ.  ಅದು ನಮ್ಮ  ಜೀವನದ  ತತ್ವ  ಮತ್ತು  ಸತ್ವ. ಬದುಕಿಗೆ ಗಾಳಿ-ನೀರು- ಆಹಾರ ಎಷ್ಟು ಮುಖ್ಯವೋ ಪ್ರೀತಿ ಅಷ್ಟೆ  ಅನಿವಾರ್ಯ. ಪ್ರೀತಿ-  ಅನಂತ, ಅನನ್ಯ, ಅನುಪಮ  ಅನುಭೂತಿ. ಆದರೆ ಇಂದು ಪ್ರೀತಿ- ಪ್ರೇಮ ಯುವಜನತೆಯ ನಡುವೆ ಘಟಿಸುವ ತೋರಿಕೆಯ ವ್ಯಾಪಾರಿ  ಮನೋಭಾವನೆಯ  ಅಸಭ್ಯ ವರ್ತನೆಯ  ಸಾಂಕೇತಿಕ  ಸಾರ್ವಜನಿಕ  ಆಚರಣೆಯ  ಸ್ವರೂಪ  ಪಡೆಯುತ್ತಿರುದು  ದುರದುಷ್ಟಕರ
ಪ್ರೀತಿ ಬದುಕಾಗಲಿ, ಇನ್ನೊ೦ದು ಜೀವಕೆ ಬೆಳಕಾಗಲಿ,  ನಂದಾದೀಪವಾಗಿ  ಚಿರಕಾಲವಿರಲಿ.  ನಿಮ್ಮ  ಪ್ರೀತಿಗೆ ಎಂದೆಂದಿಗೂ ಜಯವಾಗಲಿ.  ಎಲ್ಲರಿಗೂ 'ಪ್ರೀತಿಯ ದಿನ' ಶುಭಾಶಯಗಳು !

ಪ್ರೀತಿಯ  ಕುರಿತು  ಬರೆದ  ಕೆಲವು  ಹನಿಗವಿತೆ  ಇಲ್ಲಿ  ಹಂಚಿಕೊಂಡಿದ್ದೇನೆ  ಓದಿ ಪ್ರತಿಕ್ರಿಯಿಸಿ .  
ಒಲವು ಗಳೊಂದಿಗೆ,
ಇಂತಿ ನಿಮ್ಮವನು
ಶಿವಕುಮಾರ್ ಕಿನ್ನಿ











Saturday 7 February 2015

ಬದುಕೇ ನಿಧಾನವಾಗಿ ನಡೆ

ಬದುಕೇ ನಿಧಾನವಾಗಿ ನಡೆ
('ಆಯಿಸ್ತಾ ಚಲ್ ಜಿಂದಗಿ' ಎಂಬಹಿಂದಿ ಕವಿತೆಯ ಕನ್ನಡ ಭಾವಾನುವಾದ)
........................................................................
ನಿಧಾನವಾಗಿ ನಡೆ ಬದುಕೇ ಇನ್ನೂ ಕಡ ತೀರಿಸುವುದು ಬಾಕಿ ಉಳಿದಿದೆ.
ಕೆಲವು ನೋವುಗಳನ್ನು ಅಳಿಸುವುದಿದೆ, ಕೆಲವು ಕರ್ತವ್ಯಗಳನ್ನು ನಿಭಾಯಿಸುವುದಿದೆ.
ನಿನ್ನ ಶರವೇಗದ ನಡೆಗೆ ಕೆಲವು ಮುನಿಸಿಕೊಂಡಿವೆ ಕೆಲವು ಕೈತಪ್ಪಿ ಹೋಗಿವೆ.
ಮುನಿಸಿಕೊಂಡವುಗಳಿಗೆ ಒಲಿಸಿಕೊಳ್ಳುವುದಿದೆ ಅಳುವಿಗೆ ನಗಿಸುವುದು ಹಾಗೆ ಉಳಿದಿದೆ.
ಕೆಲವು ಈಡೆರದ ಇಚ್ಚೆಗಳು, ಕೆಲವು ಮಾಡದೇ ಉಳಿದ ಮುಖ್ಯ ಕೆಲಸಗಳಿವೆ.
ಎದೆಯಲ್ಲೇ ಸತ್ತುಹೋದ ಆಸೆಗಳಿಗೆ ಸಮಾದಿ ಮಾಡುವುದಿದೆ.
ಕೆಲವು ಸಂಭಂದಗಳು ಒಡೆದು ಹೋಗಿವೆ, ಮತ್ತೆ ಕೆಲವು ಕೂಡುತ್ತ ಕೂಡುತ್ತ ಕಳಚಿ ಕೊಂಡಿವೆ.
ಒಡೆದ-ಕಳಚಿ ಕೊಂಡ ಸಂಭಂದದ ಗಾಯಗಳಿಗೆ ಅಳಿಸುವುದಿದೆ.
ನಿ ಮುಂದೆ ನಡೆ ನಾ ಬರುತ್ತೇನೆ ನಿನ್ನ ಬಿಟ್ಟು ನಾನು ಹೇಗೆ ಬದುಕಲಿ?
ಈ ಉಸಿರ ಮೇಲೆ ಯಾರ ಹಕ್ಕಿದೆಯೋ ಅವರಿಗೆ ತಿಳಿಸುವುದು ಬಾಕಿ ಇದೆ.
ನಿಧಾನವಾಗಿ ಸಾಗು ಬದುಕೇ ಇನ್ನೂ ಎಷ್ಟೋ ಕಡಗಳನ್ನು ತೀರಿಸುವುದು ಹಾಗೆ ಉಳಿದಿದೆ.



Thursday 5 February 2015

ಬದುಕು-ಬೇಸರ

ಇಂದು ನಾವು ತುಂಬಾ ಸುಲಭವಾಗಿ ಮತ್ತು ಬಹು ಬೇಗ ಅನೇಕ ಸಂಗತಿಗಳಿಗೆ ಸಂಭಂದಿಸಿದಂತೆ 'ಬೇಸರ' ಮಾಡಿಕೊಂಡು ಬಿಡುತ್ತಿದ್ದೇವೆ. ಮೊಬೈಲು, ಕಾರು, ನೌಕರಿ, ಸಂಗಾತಿ, ಹತ್ತಿರದವರು ಹಾಗೆ ಬದುಕು !
ನಮ್ಮ ಮೂಲ ಸಮಸ್ಸೆಯೆಂದರೆ ತುಂಬಾ ಬೇಗ 'ತಾಳ್ಮೆ' ಇಲ್ಲದವರಾಗಿ ಬಿಡುತ್ತಿದ್ದೇವೆ. ಜೀವನದ ಹೆಜ್ಜೆ ಹೆಜ್ಜೆಗೂ ನಮಗೆ 'ಹೊಸತು' ಬೇಕು. ಸತ್ಯವೇನೆಂದರೆ ವಾಸ್ತವವಾಗಿ ಇದು ಸಾಧ್ಯವಿಲ್ಲ. ಈ ತೆರನಾದ ನಿರೀಕ್ಷೆಯ ಬದುಕು ಕೇವಲ ಸಮಸ್ಸೆಗಳನ್ನು ತರುತ್ತೆ ಮತ್ತು ನಮ್ಮನ್ನು ದುಖಿತರನ್ನಾಗಿ ಮಾಡುತ್ತೆ.
'ತಾಳ್ಮೆ' ಎಂಬುದು ಯಾವತ್ತಿಗೂ ಗಟ್ಟಿಯಾದ ಸದ್ಗುಣ . ಇವತ್ತಿನ ಸಂಧರ್ಭದಲ್ಲಿ ಇದು ತುಂಬಾ ಮಹತ್ತ್ವವಾದದ್ದು. ನಿಜಕ್ಕೂ ಬದುಕಿಗೆ ಏನು ಅಗತ್ಯವೋ ಅದರ ಬೆನ್ನು ಹತ್ತಿ ಹೋಗಬೇಕು. ಎಲ್ಲದಕ್ಕೂ ಬರಿ ಬೇಕು, ಬೇಕು... ಅಂತ ಎಲ್ಲದರ ಹಿಂದೆ ಓಡುತ್ತ ಹೋದರೆ ಮುಂದೆ ನಮಗೆ ಯಾವ ಜಾಗ ತಾನೇ ಉಳಿಯುತ್ತದೆ ಹೇಳಿ ?
ಅದಕ್ಕಾಗಿ ನಮ್ಮ ಹತ್ತಿರ ಏನಿದೆಯೋ ಅದನ್ನು ಆನಂದಿಸೋಣ ಹಾಗೆ ಉಳಿಸಿಕೊಳ್ಳೋಣ ಅಲ್ಲವೇ ?

Thursday 15 January 2015

ಸಂಕ್ರಾಂತಿ - ಸಂತಸ ಮತ್ತು ಸಂಕಟ

ಸಂಕ್ರಾಂತಿ - ಸಂತಸ ಮತ್ತು ಸಂಕಟ

ಸಂಕ್ರಾಂತಿ ಬಂದಿದೆ
ಮನೆ ಮನೆಗೂ ಸಿಹಿ ತಂದಿದೆ
ಮನದ ಕಹಿ ಮಾತ್ರ ಹಾಗೆ ಉಳಿದಿದೆ !
ಬೆಲ್ಲದಂಥ ಮಾತು ಎಲ್ಲರ ಬಾಯಲ್ಲಿ
ಕಪಟ ಭಾವವೇಕೆ ತೊಲಗುತ್ತಿಲ್ಲ ಇನ್ನೂ ನಮ್ಮಲ್ಲಿ ?
- ಶಿವಕುಮಾರ್ ಕಿನ್ನಿ
............................................

Wednesday 14 January 2015

"ಮಕರ ಸಂಕ್ರಾಂತಿಯ ಶುಭಾಶಯಗಳು !"

ಸ್ನೇಹಿತರೆ ಮತ್ತು ಸಂಬಂಧಿಕರೆ - ನಿಮ್ಮೆಲ್ಲರಿಗೂ
"ಮಕರ ಸಂಕ್ರಾಂತಿಯ ಶುಭಾಶಯಗಳು !"
ಹೊಸ ವರ್ಷದ ಹೊಚ್ಚಲ ಹಬ್ಬ ನಿಮ್ಮ ಬಾಳನ್ನು ಬದಾಲಾವಣೆಯ ಹೊಸ ಭರವಸೆಯ ದಿಸೆಯತ್ತ ಕೊಂಡೋಯ್ಯಲಿ. ಸೂರ್ಯ ಕಿರಣಗಳು ನಿಮ್ಮ ತನು-ಮನ-ಚೇತನ ಬೆಳಗಿ, ಸದ್ಬುದ್ದಿ, ಸಂತಸ ಮತ್ತು ಸಂಮೃದ್ದಿ ಎಲ್ಲರ ಬಾಳಲ್ಲೂ ಉದಯಿಸುವಂತಾಗಲಿ.
...................................................................................................
Friends and Relatives -
"Makara Sankranti Greetings!"
The first festival of new year may transform your lives in the direction of new hopes. Sunrays brighten your body-mind-soul to bring joy, sanity & prosperity in to your lifes.




ಆದರ್ಶ


ಬಲ್ಲರು




ಜಿಜ್ಞಾಸೆ




ಕಾಲ

 



ಜಾಣೆ


ಪರಿಣಾಮ


ಹಸಿರು



ಕನಸು ತ೦ದ ಕವಿತೆ

ಕಾವ್ಯ ಪ್ರಿಯರೆ -ಹಲವುವರ್ಷಗಳ ಹಿ೦ದೆ ನೂರ್ ಎನ್ನುವ ಪುಟ್ಟ ಮಗು ಹಾಗೆಯೇ  ಇತ್ತೀಚೆಗೆ ಮಹಮ್ಮದ್ ಎನ್ನುವ ಬಾಲಕ ನಮ್ಮ ದೆಶಕ್ಕೆ-ಬೆ೦ಗಳೂರಿಗೆ ಬ೦ದು ಹ್ರುದಯ ಕಾಯಿಲೆ ವಾಸಿ ಮಾಡಿಸಿಕೊ೦ಡು ಹೊದರು ಆ ಕ೦ದಮ್ಮಗಳ ಪಿಸುಮಾತು ಧ್ವನಿಸುವ ಪ್ರಯತ್ನ ಈ ಕವಿತೆ.





ಹುಡುಕಾಟ


Thursday 8 January 2015

2014 Review ; 2015 View

೨೦೧೪ ರ ಪುನರವಲೋಕನ ; ೨೦೧೫ ರ ಅವಲೋಕನ
..................................................................
ಅಕ್ಕರೆಯ, ಕಳೆದುಹೋದ ೨೦೧೪ ರ ವರ್ಷವೇ
ಧನ್ಯವಾದಗಳು ನಿನಗೆ.
ನೀನು ಕಲಿಸಿದ ಪಾಠ - ದೊರಕಿಸಿದ ಅನುಭವಗಳಿಗೆ.
ಒಲವಿನ, ಉಳಿದ ಮುಂದಿನ ೨೦೧೫ ರ ವರ್ಷವೇ
ನಾನೀಗ ಸಿದ್ದನಾಗಿದ್ದೇನೆ
ಹೊಸ ಆಯ್ಕೆಗಳಿಗೆ - ಸವಾಲುಗಳಿಗೆ.
ನೆಚ್ಚಿನ, ಸರ್ವಶಕ್ತನೇ
ನಿನಗೂ ಕೃತಜ್ಞತೆ , ನನಗೆ ಮತ್ತೊಂದು ಅವಕಾಶ ನೀಡಿದ್ದಕ್ಕೆ.
                     *****
2014 Review ; 2015 View
.................................................................
Dear, Past 2014
Thank you for your
Lesson & experiences.
Dear, Future 2015
I'm ready for
New choices & challenges.
Dear God, Thank you for
Giving me another chances.

Monday 5 January 2015

ಬದುಕು @ ೨೦೧೫


ಬದುಕು @ ೨೦೧೫
"ನಿನ್ನೆ ಎಂಬ ನಿಮ್ಮ ಹಳೆಯ ದಿನ
ಹಿಂದೆ ಉಳಿದುಕೊಂಡಿದೆ ಮುದುಡಿ.
ಮೇಲೇಳಲಿ ಹೊಸ ವಿನ್ಯಾಸದ ಬದುಕು ಮತ್ತೆ ಕಟ್ಟಿ.
ನಿನ್ನೆಯ ಸೋಲುವ ಭಯ ನಾಶಮಾಡಲು ಬಿಡಬೇಡಿ. ...
ಇಂದಿನ ನಿಮ್ಮ ನೂತನ ಚೈತನ್ಯ-ಸ್ಫೂರ್ತಿ.
ಬದುಕನ್ನು ಬದುಕಿ, ಕನಸುಗಳ ಬೆನ್ನಟ್ಟಿ..."

- ಭಾವಾನುವಾದ : ಶಿವಕುಮಾರ್ ಕಿನ್ನಿ