Sunday 11 May 2014

ಅಮ್ಮನಿಗೊಂದು ನಮನ- ಶುಭಾಶಯ !

ಅಮ್ಮನಿಗೊಂದು ನಮನ- ಶುಭಾಶಯ !

"
ಅಮ್ಮ - ನಮ್ಮೆಲ್ಲರ ಮನೆಯ ಆತ್ಮ, ಜ್ಯೋತಿ
ಅಮ್ಮ - ನಮ್ಮೆಲ್ಲರ ಮನದ ಸ್ಪೂರ್ತಿ
ಅಮ್ಮ - ತ್ಯಾಗ, ಅಂತಕರಣದ ಮೂರ್ತಿ
ಅಮ್ಮ - ವಿದ್ಯೆ , ಬುದ್ದಿ ಕಲಿಸಿದ ಸರಸ್ವತಿ ...
ಅಮ್ಮ - ಹೃದಯ ವೀಣೆಯ ತಂತಿ
ಅಮ್ಮ - ಪದವಲ್ಲ, ಮಾತಲ್ಲ, ಬದುಕಿನ ಕೃತಿ
ಅಮ್ಮ - ಜೀವ ಭಾವಲಹರಿಯ ಪಲ್ಲವಿ
ಅಮ್ಮ - ನಮ್ಮ ಬಾಳ ಗೀತೆಯ ಚರಣ
ಅಮ್ಮ - ನಮ್ಮೆದೆಯ ಜೀವಂತ ಕವನ
ಅಮ್ಮ - ನಮ್ಮೆಲ್ಲರ ಆತ್ಮದ ಅದಮ್ಯ ಚೇತನ ಚಿರಂತನ"

ಅಮ್ಮ ಒಂದು ದಿನದ ಆಚರಣೆ ಆಗಬಾರದು .
ಹೊಸ ವಸ್ತುಗಳ ಫಲಕದ ಬರಿ ಹೆಸರಾಗಬಾರದು.
'
ಮನೆಯಮೇಲೆ ತಾಯಿ ಕೃಪಾ
ಅನಾಥಾಲಯದಲ್ಲಿ ಅವ್ವ -ಅಪ್ಪ'

ಎನ್ನುವ ಹಾಗಾಗದಿರಲಿ ಎನ್ನುವ ಆಶಯಗಳೊಂದಿಗೆ....
ವಿಶ್ವದ ಎಲ್ಲ ತಾಯಂದಿರಿಗೆ ವಂದನೆಗಳು, ಅಭಿನಂದನೆಗಳು !
·         ಶಿವಕುಮಾರ್  ಕಿನ್ನಿ