Thursday 5 February 2015

ಬದುಕು-ಬೇಸರ

ಇಂದು ನಾವು ತುಂಬಾ ಸುಲಭವಾಗಿ ಮತ್ತು ಬಹು ಬೇಗ ಅನೇಕ ಸಂಗತಿಗಳಿಗೆ ಸಂಭಂದಿಸಿದಂತೆ 'ಬೇಸರ' ಮಾಡಿಕೊಂಡು ಬಿಡುತ್ತಿದ್ದೇವೆ. ಮೊಬೈಲು, ಕಾರು, ನೌಕರಿ, ಸಂಗಾತಿ, ಹತ್ತಿರದವರು ಹಾಗೆ ಬದುಕು !
ನಮ್ಮ ಮೂಲ ಸಮಸ್ಸೆಯೆಂದರೆ ತುಂಬಾ ಬೇಗ 'ತಾಳ್ಮೆ' ಇಲ್ಲದವರಾಗಿ ಬಿಡುತ್ತಿದ್ದೇವೆ. ಜೀವನದ ಹೆಜ್ಜೆ ಹೆಜ್ಜೆಗೂ ನಮಗೆ 'ಹೊಸತು' ಬೇಕು. ಸತ್ಯವೇನೆಂದರೆ ವಾಸ್ತವವಾಗಿ ಇದು ಸಾಧ್ಯವಿಲ್ಲ. ಈ ತೆರನಾದ ನಿರೀಕ್ಷೆಯ ಬದುಕು ಕೇವಲ ಸಮಸ್ಸೆಗಳನ್ನು ತರುತ್ತೆ ಮತ್ತು ನಮ್ಮನ್ನು ದುಖಿತರನ್ನಾಗಿ ಮಾಡುತ್ತೆ.
'ತಾಳ್ಮೆ' ಎಂಬುದು ಯಾವತ್ತಿಗೂ ಗಟ್ಟಿಯಾದ ಸದ್ಗುಣ . ಇವತ್ತಿನ ಸಂಧರ್ಭದಲ್ಲಿ ಇದು ತುಂಬಾ ಮಹತ್ತ್ವವಾದದ್ದು. ನಿಜಕ್ಕೂ ಬದುಕಿಗೆ ಏನು ಅಗತ್ಯವೋ ಅದರ ಬೆನ್ನು ಹತ್ತಿ ಹೋಗಬೇಕು. ಎಲ್ಲದಕ್ಕೂ ಬರಿ ಬೇಕು, ಬೇಕು... ಅಂತ ಎಲ್ಲದರ ಹಿಂದೆ ಓಡುತ್ತ ಹೋದರೆ ಮುಂದೆ ನಮಗೆ ಯಾವ ಜಾಗ ತಾನೇ ಉಳಿಯುತ್ತದೆ ಹೇಳಿ ?
ಅದಕ್ಕಾಗಿ ನಮ್ಮ ಹತ್ತಿರ ಏನಿದೆಯೋ ಅದನ್ನು ಆನಂದಿಸೋಣ ಹಾಗೆ ಉಳಿಸಿಕೊಳ್ಳೋಣ ಅಲ್ಲವೇ ?

No comments:

Post a Comment